ಪ್ರಚಲಿತ ವಿದ್ಯಮಾನಗಳು: ಮಾರ್ಚ್ 1, 2013

ಪ್ರಚಲಿತ ವಿದ್ಯಮಾನಗಳು: ಮಾರ್ಚ್ 1, 2013

2013-14 ನೇ ಕೇಂದ್ರ ಬಜೆಟ್ ಮಂಡಿಸಿದ: ಚಿದಂಬರಂ
ಕೇಂದ್ರ ಹಣಕಾಸು ಸಚಿವ ಪಿ. ಚಿದಂಬರಂ ರವರು ಗುರುವಾರ ಲೋಕಸಭೆಯಲ್ಲಿ 2013-14 ನೇ ಸಾಲಿನ ಬಜೆಟ್ ಮಂಡನೆ ಮಾಡಿದರು. 2013-14 ನೇ ಸಾಲಿನ ಯೋಜನಾ ವೆಚ್ಚವನ್ನು ಶೇ.6.58 ರಷ್ಟು ಹೆಚ್ಚಿಸಲಾಗಿದ್ದು, ರೂ.5.53 ಲಕ್ಷ ಕೋಟಿಗೆ ಏರಿಕೆಯಾಗಿದೆ. ಪ್ರಸ್ತಕ ಹಣಕಾಸು ವರ್ಷದಲ್ಲಿ ಒಟ್ಟಾರೆ ರಾಷ್ಟ್ರೀಯ ಉತ್ಪನ್ನದ (ಜಿಡಿಪಿ) ಶೇ.5.2 ರಷ್ಟು ವಿತ್ತೀಯ ಕೊರತೆ ಅಂದಾಜು ಮಾಡಲಾಗಿದೆ. 2013-14 ನೇ ಹಣಕಾಸು ವರ್ಷದಲ್ಲಿ ಶೇ.4.8 ರಷ್ಟು ತಗ್ಗಿಸುವ ಗುರಿ ಹೊಂದಿಸಲಾಗಿದೆ. 2013-14 ನೇ ಸಾಲಿನಲ್ಲಿ ಬಜೆಟ್ ನಲ್ಲಿ ವ್ಯಕ್ತಪಡಿಸಿರುವ ಪ್ರಮುಖ ಅಂಶಗಳು ಇಲ್ಲಿವೆ.
· 2013-14 ನೇ ಸಾಲಿನ ಬಜೆಟ್ ಗಾತ್ರ ರೂ.16,65,297 ಕೋಟಿ. ಇದರಲ್ಲಿ ಯೋಜನಾ ವೆಚ್ಚ ರೂ.5.55 ಲಕ್ಷ ಕೋಟಿ ಮತ್ತು ಯೋಜನೇತರ ವೆಚ್ಚ ರೂ.11.10 ಲಕ್ಷ ಕೋಟಿ ಸೇರಿದೆ.
· ಕೃಷಿಗೆ ರೂ. 7 ಲಕ್ಷ ಕೋಟಿ ಸಾಲ: 2013-14 ನೇ ಸಾಲಿನಲ್ಲಿ ಕೃಷಿ ಸಾಲವನ್ನು ರೂ.7 ಲಕ್ಷ ಕೋಟಿಗೆ ಹೆಚ್ಚಿಸಲಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ರೂ.5,75,000 ಕೋಟಿ ನೀಡಲಾಗಿತ್ತು. ಸಕಾಲಕ್ಕೆ ಬೆಳೆ ಸಾಲ ಮರುಪಾವತಿ ಮಾಡುವ ರೈತರಿಗೆ ಶೇ.4 ರಷ್ಟು ಬಡ್ಡಿ ಪಾವತಿಸುವ ಯೋಜನೆಯನ್ನು ಮುಂದುವರೆಸಲಾಗುವುದು. ಇಲ್ಲಿಯವರೆಗೆ ಇದು ಕೇವಲ ರಾಷ್ಟ್ರೀಕೃತ ಬ್ಯಾಂಕ್ ಗಳು, ಸಹಕಾರಿ ಬ್ಯಾಂಕ್ ಗಳಿಂದ ಪಡೆಯುವ ಸಾಲಕ್ಕೆ ಮಾತ್ರ ಅನ್ವಯಿಸುತ್ತಿತ್ತು. ಇನ್ನು ಮುಂದೆ ಖಾಸಗಿ ಬ್ಯಾಂಕ್ ಗಳಿಂದ ಪಡೆಯುವ ಬ್ಯಾಂಕ್ ಸಾಲಕ್ಕೂ ವಿಸ್ತರಿಸಲಾಗುವುದು.
· ಮಹಿಳಾ ಬ್ಯಾಂಕ್: ದೇಶದಲ್ಲೇ ಸರ್ಕಾರಿ ರಂಗದಲ್ಲಿ ಮೊದಲಲೆನಿಸಿರುವ ಮಹಿಳಾ ಬ್ಯಾಂಕ್ ಸ್ಥಾಪನೆಯ ಬಗ್ಗೆ ಬಜೆಟ್ ನಲ್ಲಿ ಮಂಡಿಸಲಾಗಿದೆ. ಈ ಮಹಿಳಾ ಬ್ಯಾಂಕ್ ಗೆ ರೂ.1,000 ಕೋಟಿ ಮೂಲ ನಿಧಿಯನ್ನು ಸರ್ಕಾರ ಒದಗಿಸಲಿದೆ. ಏಕಾಂಗಿ ಮತ್ತು ನಿರುದ್ಯೋಗಿ ಮಹಿಳೆಯರಿಗೆ ಈ ಯೋಜನೆಯಿಂದ ಅನುಕೂಲವಾಗಲಿದೆ.
· ವಿಶೇಷ ನಿರ್ಭಯ ನಿಧಿ: ದೆಹಲಿ ಸಾಮೂಹಿಕ ಆತ್ಯಚಾರಕ್ಕೆ ಒಳಗಾದ ಯುವತಿಯ ಗೌರವಾರ್ಥ ರೂ.1000 ಕೋಟಿ ರೂಪಾಯಿ ಮೂಲ ನಿಧಿ ಹೊಂದಿದ ವಿಶೇಷ ನಿರ್ಭಯ ನಿಧಿ ಸ್ಥಾಪಿಸಲಾಗುವುದು.
· ಸಮಗ್ರ ಶಿಶು ಅಭಿವೃದ್ದಿ ಯೋಜನೆಗೆ (ICDS) ರೂ.17,700 ಕೋಟಿಗೆ ಹೆಚ್ಚಿಸಲಾಗಿದೆ. ಇದು ಕಳೆದ ವರ್ಷಕ್ಕೆ ಹೋಲಿಸಿದರೆ ಶೇ.11.7 ರಷ್ಟು ಏರಿಕೆಯಾಗಿದೆ.
· ರಕ್ಷಣಾ ವೆಚ್ಚದಲ್ಲಿ ಶೇ.14 ರಷ್ಟು ಏರಿಕೆ: 2013-14 ನೇ ಸಾಲಿನಲ್ಲಿ ರಕ್ಷಣಾ ಕ್ಷೇತ್ರಕ್ಕೆ ರೂ.2,03,672 ಕೋಟಿಗಳನ್ನು ಮೀಸಲಿಡಲಾಗಿದೆ. ಇದರಲ್ಲಿ ರೂ.86,714 ಕೋಟಿಯನ್ನು ಮೂಲ ವೆಚ್ಚಕ್ಕೆ ಮೀಸಲಿಡಲಾಗುವುದು.
· ಪ್ರಸ್ತಕ ಸಾಲಿನಲ್ಲಿ ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆ (National Food Security Act) ಜಾರಿಗೆ ರೂ.10,000 ಕೋಟಿ ಮೊತ್ತವನ್ನು ಮೀಸಲಿಡಲಾಗಿದೆ.
· ಈ ಬಾರಿ ದುಬಾರಿಯಾಗಲಿರುವ ವಸ್ತುಗಳು: ಆಮದು ಕಚ್ಚಾ ರೇಷ್ಮೆ, ಸಿಗರೇಟ್, ವಿದೇಶಿ ಐಷರಾಮಿ ಕಾರುಗಳು, ವಿದೇಶಿ ವಿಲಾಸಿ ದೋಣಿಗಳು, 2000 ರೂಪಾಯಿ ಮೀರಿದ ಮೊಬೈಲ್.
· ಬೆಂಗಳೂರಿ-ಮುಂಬೈ ಕಾರಿಡಾರ್: ಬೆಂಗಳೂರು-ಮುಂಬೈ ಮತ್ತು ಬೆಂಗಳೂರು-ಚೆನ್ನೈ ಕೈಗಾರಿಕಾ ಕಾರಿಡಾರ್ ಯೋಜನೆಯ ಸಿದ್ದತೆಯನ್ನು ಕೈಗೆತ್ತಿಕೊಳ್ಳುವುದಾಗಿ ಬಜೆಟ್ ನಲ್ಲಿ ತಿಳಿಸಲಾಗಿದೆ. ಬೆಂಗಳೂರು-ಮುಂಬೈ ಕಾರಿಡಾರ್ ಯೋಜನೆ ರಾಜ್ಯದ 550 ಕಿ,ಮೀ ರಸ್ತೆ ಮತ್ತು 330 ಕಿ.ಮೀ ರೈಲು ಮಾರ್ಗಗಳನ್ನು ಹೊಂದಿದೆ.
· ಬೆಂಗಳೂರು ಮೆಟ್ರೊಗೆ ಈ ಬಾರಿಯ ಬಜೆಟ್ ನಲ್ಲಿ ರೂ.1660 ಕೋಟಿ ರೂಪಾಯಿ ನೀಡಲಾಗಿದೆ.
· ರೇಷ್ಮೇ ಆಮದು ಸುಂಕವನ್ನು ಶೇ.5 ರಿಂದ ಶೇ.15 ರಷ್ಟು ಹೆಚ್ಚಿಸಲಾಗಿದ್ದು, ರಾಜ್ಯದ ರೇಷ್ಮೇ ಬೆಳೆಗಾರರಿಗೆ ಅಲ್ಪ ಮಟ್ಟಿಗೆ ಸಮಾಧಾನ ತಂದಿದೆ. ಅಲ್ಲದೇ ನೇಕಾರರಿಗೆ ಶೇ.6 ರಷ್ಟು ದರದಲ್ಲಿ ಸಾಲ ನೀಡಲಾಗುವುದು.

 

ಕೇಂದ್ರ ಬಜೆಟ್: ಕೆಲವು ಉಪಯುಕ್ತ ಮಾಹಿತಿಗಳು
untitled· 2013-14 ನೇ ಸಾಲಿನ ಬಜೆಟ್ ಚಿದಂಬರಂ ರವರ ಪಾಲಿಗೆ 8 ನೇ ವಾರ್ಷಿಕ ಬಜೆಟ್. ಭಾರತದ ಮಾಜಿ ಪ್ರಧಾನ ಮಂತ್ರಿಗಳಾದ ಮೊರಾರ್ಜಿ ದೇಸಾಯಿಯವರ ನಂತರ ಅತಿ ಹೆಚ್ಚು ಬಜೆಟ್ ಮಂಡಿಸಿದ ಎರಡನೇಯವರು ಚಿದಂಬರಂ.
· ಮೊರಾರ್ಜಿ ದೇಸಾಯಿಯವರು 10 ಬಾರಿ ಬಜೆಟ್ ಮಂಡಿಸುವ ಮೂಲಕ ಅತಿ ಹೆಚ್ಚು ಬಾರಿ ಬಜೆಟ್ ಮಂಡಿಸಿದವರು ಎಂಬ ಹಿರಿಮೆಯನ್ನು ಹೊಂದಿದ್ದಾರೆ.
· ಮಧ್ಯಂತರ ಮತ್ತು ವಿಶೇಷ ಬಜೆಟ್ ಗಳು ಸೇರಿ ಈ ಸಾಲಿನ ಬಜೆಟ್ ಭಾರತದ 82 ನೇ ಬಜೆಟ್ ಎಂಬುದು ವಿಶೇಷ. ಇದುವರೆಗೂ 66 ವಾರ್ಷಿಕ, 12 ಮಧ್ಯಂತರ ಮತ್ತು 4 ವಿಶೇಷ ಬಜೆಟ್ ಗಳನ್ನು ಮಂಡಿಸಲಾಗಿದೆ.
· ಸ್ವಾತಂತ್ರ್ಯ ನಂತರ ದೇಶದ ಪ್ರಥಮ ಬಜೆಟ್ ನ್ನು ಆರ್.ಕೆ.ಷಣ್ಮಗಂ ಶೆಟ್ಟಿಯವರು ನವೆಂಬರ್ 26, 1947 ರಂದು ಮಂಡಿಸಿದ್ದರು.
· ರಾಷ್ಟ್ರಪತಿಗಳಾದ ಪ್ರಣಭ್ ಮುಖರ್ಜಿ, ವೈ.ಬಿ.ಚವಾಣ್, ಯಶ್ವಂತ್ ಸಿನ್ಹಾ ಮತ್ತು ಸಿ.ಡಿ.ದೇಶಮುಖ್ ರವರು 7 ಬಾರಿ ಬಜೆಟ್ ಮಂಡನೆ ಮಾಡಿದ್ದಾರೆ.
· ಭಾರತದ ಮೊದಲ ಮಧ್ಯಂತರ ಬಜೆಟನ್ನು ಟಿ.ಟಿ.ಕೃಷ್ಣಂಚಾರಿ ರವರು ನವೆಂಬರ್ 30, 1956 ರಲ್ಲಿ ಮಂಡಿಸಿದರು, ಮತ್ತೇ ಎರಡನೇ ಮಧ್ಯಂತರ ಬಜೆಟ್ ನ್ನು ಅವರೇ 1965 ರಲ್ಲಿ ಮಂಡಿಸಿದ್ದರು. ಉಳಿದಂತೆ ಮೂರನೇ ಮತ್ತು ನಾಲ್ಕನೇ ಮಧ್ಯಂತರ ಬಜೆಟ್ ನ್ನು ವೈ.ಬಿ.ಚವಾಣ್ ರವರು 1971 ರಲ್ಲಿ ಮತ್ತು 1974 ರಲ್ಲಿ ಮಂಡಿಸಿದ್ದರು.

 

ಮೇಘಾಲಯ ಮತ್ತು ನಾಗಲ್ಯಾಂಡ್ ಚುನಾವಣಾ ಫಲಿತಾಂಶ
electionತ್ರಿಪುರ, ಮೇಘಾಲಯ ಮತ್ತಯ ನಾಗಾಲ್ಯಾಂಡ್ ರಾಜ್ಯಗಳಲ್ಲಿ ನಡೆದ ವಿಧಾನಸಭೆ ಫಲಿತಾಂಶ ಹೊರಬಿದ್ದಿದೆ. ನಿರೀಕ್ಷೆಯಂತೆ ತ್ರಿಪುರ ದಲ್ಲಿ ಸಿಪಿಎಂ ತ್ರಿಪುರದಲ್ಲಿ ಜಯಭೇರಿ ಬಾರಿಸಿದೆ. ಚುನಾವಣಾ ಫಲಿತಾಂಶದ ವರದಿ ಇಲ್ಲಿದೆ.
ತ್ರಿಪುರ:
· ವಿಧಾನಸಭೆಯ ಒಟ್ಟು 60 ಸ್ಥಾನಗಳಲ್ಲಿ ಸಿಪಿಎಂ 49 ಸ್ಥಾನಗಳನ್ನು ಗೆದ್ದಿದೆ. ಈ ಚುನಾವಣೆಯಲ್ಲಿ ಕೇವಲ 10 ಸೀಟುಗಳನ್ನು ಗೆಲ್ಲುವ ಮೂಲಕ ಕಾಂಗ್ರೆಸ್ ಬಾರಿ ಮುಖಭಂಗ ಅನುಭವಿಸಿದೆ. ಸಿಪಿಐ ಒಂದು ಸ್ಥಾನದಲ್ಲಿ ಮಾತ್ರ ಜಯಗಳಿಸಿದೆ.
· 1978 ರ ಬಳಿಕ ಸಿಪಿಎಂ ಕಂಡ ಅದ್ಬುತ ಗೆಲುವ ಇದಾಗಿದೆ. ಅಂದು 56 ಕ್ಷೇತ್ರಗಳಲ್ಲಿ ಸಿಪಿಎಂ ವಿಜಯ ಪತಾಕೆಯನ್ನ ಹಾರಿಸಿತ್ತು.
· ದೇಶದ ಅತ್ಯಂತ ಬಡ ಮುಖ್ಯಮಂತ್ರಿ ಎಂದು ಪ್ರಸಿದ್ದರಾಗಿರುವ ‘ಮಾಣಿಕ್ ಸರ್ಕಾರ್” ರವರು ಸತತ ನಾಲ್ಕನೇ ಬಾರಿಗೆ ಮುಖ್ಯ ಮಂತ್ರಿಯಾಗಲಿದ್ದಾರೆ.
ಮೇಘಾಲಯ:
· ಮೇಘಾಲಯದಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ 29 ಕ್ಷೇತ್ರಗಳಲ್ಲಿ ಗೆಲುವನ್ನು ಪಡೆದುಕೊಂಡಿದೆ. ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ 25 ಕ್ಷೇತ್ರಗಳಲ್ಲಿ ಮಾತ್ರ ಗೆಲುವು ಪಡೆದಿತ್ತು.
· ರಾಷ್ಟ್ರೀಯ ಕಾಂಗ್ರೆಸ್ ತೊರೆದು ನ್ಯಾಷನಲ್ ಪೀಪಲ್ಸ್ ಪಾರ್ಟಿಯನ್ನು ಕಟ್ಟಿದ್ದ ಪಿ.ಎ ಸಂಗ್ಮಾ ರವರು ಕೇವಲ 2 ಸ್ಥಾನಗಳನ್ನು ಗೆದ್ದಿದ್ದಾರೆ. ಉಳಿದಂತೆ ಯುಡಿಎ ಪಕ್ಷ 8 ಕ್ಷೇತ್ರಗಳಲ್ಲಿ ಜಯ ಸಾಧಿಸಿದೆ.
· ಮೇಘಾಲಯದ ಮುಖ್ಯಮಂತ್ರಿಗಳಾಗಿ ಮುಖಲ್ ಸಂಗ್ಮಾ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾಗಾಲ್ಯಾಂಡ್:
· ನಾಗಾಲ್ಯಾಂಡ್ ನಲ್ಲಿ ಮತ್ತೆ ನಾಗಾ ಪೀಪಲ್ಸ್ ಪ್ರಂಟ್ ಪಕ್ಷ ಅಧಿಕಾರದ ಗದ್ದುಗೆಯನ್ನು ಏರಿದೆ. 38 ಸ್ಥಾನಗಳಲ್ಲಿ ಜಯಗಳಿಸಿ ಸ್ವತಂತ್ರವಾಗಿ ಮೂರನೇ ಭಾರಿ ರಾಜ್ಯವನ್ನು ಆಳಲಿದೆ.

 

ದೆಲವರ್ ಹುಸೇನ್ ಗೆ ಗಲ್ಲು: ಬಾಂಗ್ಲದಲ್ಲಿ ಭುಗಿಲೆದ್ದ ಹಿಂಸಾಚಾರ
Delwar-Hossain-Sayedee-010ಬಾಂಗ್ಲದೇಶದ “ಜಮತ್-ಎ-ಇಸ್ಲಾಮಿ” ಪಕ್ಷದ ಉಪಾಧ್ಯಕ್ಷರಾದ ದೆಲವರ್ ಹುಸೇನ್ ರವರಿಗೆ ಗಲ್ಲು ಶಿಕ್ಷೆ ವಿಧಿಸಿರುವ ಕಾರಣ “ಜಮತ್-ಎ-ಇಸ್ಲಾಮಿ” ಪಕ್ಷದ ಕಾರ್ಯಕರ್ತರು ನಡೆಸುತ್ತಿರುವ ಹಿಂಸಾಚಾರ ಬಾಂಗ್ಲದಲ್ಲಿ ಶಾಂತಿ ಕದಡಿಸಿದೆ. ಈ ಹಿನ್ನೆಲೆಯಲ್ಲಿ ನಡೆದ ಹಿಂಸಾಚಾರದಲ್ಲಿ ಬಾಂಗ್ಲದ ಮೂರು ಪೋಲಿಸರು ಸೇರಿದಂತೆ ಒಟ್ಟು 36 ಜನರು ಮರಣಹೊಂದಿದ್ದಾರೆ.
ವಿವಾದ ಏನು?
· 1971 ರಲ್ಲಿ ನಡೆದ ಬಾಂಗ್ಲ ವಿಮೋಚನ ಚಳುವಳಿಯ ಸಂಧರ್ಭದಲ್ಲಿ ಯುದ್ದಾಪರಾಧ ನಡೆಸಿರುವುದಾಗಿ ಹುಸೇನ್ ರವರನ್ನು ಆರೋಪಿಸಲಾಗಿತ್ತು. ವಿಮೋವನ ಚಳುವಳಿಯ ವೇಳೆ ನಡೆದ ಯುದ್ದಾಪರಾಧ ತನಿಖೆಗೆಂದೇ ಬಾಂಗ್ಲದೇಶ ಅಂತರಾಷ್ಟ್ರೀಯ ಅಪರಾಧಿ ವಿಚಾರಣಾ ವಿಶೇಷ ನ್ಯಾಯಾಲಯವನ್ನು ಸ್ಥಾಪಿಸಿದೆ. ವಿಚಾರಣೆ ವೇಳೆ ಹುಸೇನ್ ರವರು ಮಾಡಿರುವ ಕೃತ್ಯ ಸಾಬೀತಾದ ಕಾರಣ ನ್ಯಾಯಾಲವು ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ.

 

468 ad

Comments are closed.